ಕೆಜಿಎಫ್: ಅತ್ತಿಗೆಯನ್ನು ಚಾಕುವಿನಿಂದ ಇರಿದು ಸಾಯಿಸಿದ ಮೈದುನ
ಅಣ್ಣನಾದ ಮುರಳಿಯ ಮೊದಲ ಪತ್ನಿ ಬೇತಮಂಗಲದಲ್ಲಿ ವಾಸವಿದ್ರೆ, ಎರಡನೇ ಪತ್ನಿ ಕೊತ್ತೂರು ಗ್ರಾಮದಲ್ಲಿ ವಾಸವಿದ್ರು. ಆದರೆ ಇತ್ತೀಚೆಗೆ ಮುರಳಿ ತನ್ನ ತಂದೆಯ ಬಳಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿದ್ದ. ಈ ವಿಚಾರವು ಮುರಳಿಯ ತಮ್ಮ ಚಲಪತಿಯ ಕಣ್ಣು ಕೆಂಪಗಾಗಿಸಿತ್ತು, ಅಲ್ಲದೆ ಅಣ್ಣ ಮುರಳಿ ಎರಡನೇ ಮದುವೆ ಮಾಡಿಕೊಂಡದ್ದ ವಿಚಾರಕ್ಕೂ ತಮ್ಮನಾದ ಚಲಪತಿಗೆ ಕೋಪವಿತ್ತು.
ಅತ್ತಿಗೆಯನ್ನು ಚಾಕುವಿನಿಂದ ಇರಿದು ಸಾಯಿಸಿದ ಮೈದುನ
ಆಕೆ ತನ್ನ ಗಂಡನಿಗೆ ಎರಡನೇ ಹೆಂಡತಿ ಆದ್ರೂ ಸಂಸಾರದಲ್ಲೇನು ಸಮಸ್ಯೆ ಇರಲಿಲ್ಲ, ಗಂಡ ಮೀನು ಹಿಡಿಯುವ ಕೆಲಸ ಮಾಡಿದ್ರೆ ಈಕೆ ಕೂಡಾ ಹೂವು ಕಟ್ಟಿಕೊಂಡು ಜೀವನ ಮಾಡುತ್ತಿದ್ದಳು, ಹೀಗಿದ್ರು ಇವರಿಬ್ಬರ ಮೇಲೆ ಅವರದ್ದೇ ಕುಟುಂಬದವರಿಗೆ ಆಸ್ತಿ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು, ಮೈದುನನೇ ಬಂದು ಅತ್ತಿಗೆಯನ್ನು ಕೊಂದು ಹಾಕಿದ್ದಾನೆ. ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಹೂವು, ಅಲ್ಲೇ ಚೆಲ್ಲಾಡಿರುವ ರಕ್ತದ ಕಲೆಗಳು, ಇನ್ನೊಂದೆಡೆ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಕಣ್ಣೀರು (Family dispute) ಈ ಎಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕು ಕೊತ್ತೂರು ಗ್ರಾಮದಲ್ಲಿ (KGF taluk in Kolar dist).
ಹೌದು ಬುಧವಾರ ರಾತ್ರಿ ಈ ಗ್ರಾಮದಲ್ಲಿ ತನ್ನ ಅತ್ತಿಗೆಯನ್ನು ಮೈದುನನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದಾನೆ, ತೇಜಸ್ವಿನಿ ಕೊಲೆಯಾದ ಮಹಿಳೆ. ಅಷ್ಟಕ್ಕೂ ಆಗಿದ್ದೇನು ಅಂತ ನೋಡೋದಾದ್ರೆ, ಕೊತ್ತೂರು ಗ್ರಾಮದ ಪಕ್ಕದಲ್ಲಿರುವ ಬ್ಯಾಟರಾನಹಳ್ಳಿ ಗ್ರಾಮದಲ್ಲಿ ಮುರಳಿ ಹಾಗೂ ಚಲಪತಿ ಅಣ್ಣ ತಮ್ಮಂದಿರಿದ್ದಾರೆ. ಈ ಪೈಕಿ ಮುರಳಿ ಹಾಗೂ ಚಲಪತಿ ನಡುವೆ ಹಲವು ವರ್ಷಗಳಿಂದ ತಮ್ಮೂರಿನಲ್ಲಿರುವ ಮೂರು ಎಕರೆ ಭೂಮಿಗೆ ಸಂಬಂಧಿಸಿದಂತೆ ವಿವಾದ ಇತ್ತು.
ಈ ಸಂಬಂಧ ಗಲಾಟೆ ಇತ್ತು. ಕಾರಣ ಮುರಳಿ ಪಿತ್ರಾರ್ಜಿತ ಅಸ್ತಿಯಲ್ಲಿ ಭಾಗ ಕೇಳಿದ್ದ ಅನ್ನೋ ಕಾರಣಕ್ಕೆ ಆಗಾಗ ಗಲಾಟೆ ನಡಯುತ್ತಲೇ ಇತ್ತು. ಮರುಳಿ ಎರಡು ಮದುವೆಯಾಗಿದ್ದ. ಈ ಪೈಕಿ ನಿನ್ನೆ ಬುಧವಾರ ಎರಡನೇ ಪತ್ನಿ ತೇಜಸ್ವಿನಿ ಮನೆಯಲ್ಲಿದ್ದಾಗ ಚಲಪತಿ ತನ್ನ ಮೂರು ಜನ ಸ್ನೇಹಿತರೊಂದಿಗೆ ಮನೆಗೆ ಬಂದು ನುಗ್ಗಿ ಮನೆಯ ಬಾಗಿಲಲ್ಲೇ ಇದ್ದ ತನ್ನ ಅತ್ತಿಗೆ ತೇಜಸ್ವಿನಿಗೆ ಚಾಕುವಿನಿಂದ ಇರಿದಿದ್ದಾನೆ. ಈವೇಳೆ ತೀವ್ರವಾಗಿ ಗಾಯಗೊಂಡ ತೇಜಸ್ವಿನಿಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.